Sunday, 14 January 2018

ಹಣದ ಸುಂದರಿ

ಹಣದ ಸುಂದರಿ 
===========
ಇವಳ್ಯಾರೋ  ಸುಂದರಿ 
ಹಣದಲ್ಲೇ ನನ್ನ ಖರೀದಿಸುವ ಹಂಬಲ 
ಋಣದಲ್ಲೇ ದಾಸನಂತೆ ಬದುಕೆನ್ನುವ ಚಪಲ.

ಬೇಕಾದಾಗ ಕರೆಯುವಳು ಅಂಬಾರಿ ಕೊಟ್ಟು,
ಭವ್ಯ ಬಂಗಲೆಯಲ್ಲಿ ಬರಡು ಬದುಕು.

ಕುರುಡು ಕಾಂಚಾಣಿ ಇವಳು,
ಹಮ್ಮು ಬಿಮ್ಮಿನ ಹೆಮ್ಮಾರಿ,
ದುಡ್ಡಿನ ದುರಹಂಕಾರಿ.

ಹಗಲೆನ್ನಲಿಲ್ಲ, ರಾತ್ರಿಯ ಪರಿವೆ ಇರಲಿಲ್ಲ.
ದುಡಿದು ಬೆಂಡಾಗಿತ್ತು ಮೊಂಡಾಗಿತ್ತು ಬೆನ್ನು ಮೂಳೆ.
ತನ್ನ ಸುಖಕ್ಕೆ ನನ್ನ ಬಲಿ ಕೊಟ್ಟಳಿ  ಸುಂದರಿ.  

ಹೋರಾಟದ ಬದುಕಲ್ಲಿ ಹೊಟ್ಟೆಕಿಚ್ಚೆ ಆಹಾರ ಇವಳಿಗೆ.
ಮುಗ್ಧತೆಯ ಮುಖವಾಡ ಹೊತ್ತ ಮಾರಿ ಹೆಣ್ಣಿವಳು.

ನನ್ನ ಗೆದ್ದೆನೆನ್ನುವ ಹಮ್ಮು ಬಿಮ್ಮಿನ ಹೆಮ್ಮಾರಿ,
ಸೋತು ಸುಣ್ಣವಾದರೂ ಬಣ್ಣ ನೀಡುವ ಹಮ್ಮಿರ ನಾನು.

ತನ್ನತನವನ್ನು ಮೂರು ಕಾಸಿಗೆ ಹರಾಜು ಹಾಕಿ,
ಸವಾರಿ ಮಾಡುವ ವಿಷ ಸರ್ಪವೆ,
ಮೂರು ದಿನದ ಸಂತಿ ಇದು,
ಬದುಕಲು ಬಿತ್ತಿ, ಬದುಕು ಕಟ್ಟಿಕೊ,

ಎಲೆ ಮನು ಕುಲದ ಮೃಗವೆ,
ಹೆಣವಾಗಲು ಹಣವೇನು ಹೊತ್ತುಕೊಂಡು ಹೋಗುವೆಯಾ?.....

No comments:

Post a Comment

ಮಂಕುತಿಮ್ಮನ ಕಗ್ಗ..

ಕಳೆದ ಒಂದು ವರ್ಷದಿಂದ ಮನಸಿಗೆ ಖುಷಿ ಕೊಡುವ ಎಲ್ಲಾ ಕೆಲಸಗಳು ಮಾಡಲಿಕ್ಕೆ ಸಮಯ ಸಿಗ್ತಾ ಇದೆ. ಸಮಯ ಹೊಂದಿಸಿಕೊಳ್ಳುತ್ತಿದ್ದೇನೆ ಅಂದರೂ ಸರಿಯೇ. ಮುಖ್ಯವಾಗಿ ನಾನು ಕನ್ನಡ ...