Friday, 12 January 2018

ನಿನ್ನವ್ವನಾಗೆ ಹುಟ್ಟಬೇಕು,...


ನಿನ್ನವ್ವನಾಗೆ ಹುಟ್ಟಬೇಕು,

ಮುಂದಿನ ಜನ್ಮವೊಂದಿದ್ದರೆ

====================

ಹುಟ್ಟಿ ಬಂದೆ ನಾ ಈ ಭೂಮಿಗೆ 

ಅರಿವಿಲ್ಲದ ಮಾಂಸದ ಮುದ್ದೆಯಾಗಿ.

ನನ್ನ ಆ ಮೊದಲ ಕಿರುಚಾಟ 

ನನ್ನವ್ವನ ರೋಮಾಂಚನಗೊಳಿಸಿತ್ತು 

ಅದೆಷ್ಟೋ ಕನಸುಗಳನ್ನು ಹೆಣೆದು 

ಒಂಬತ್ತು ತಿಂಗಳು ಒಡಲಲ್ಲಿ 

ಹೊತ್ತು ಜೋಪಾನ ಮಾಡಿದಳು 

ನನ್ನ ಆಗಮನ ಅವಳ ಬಾಳಲ್ಲಿ 

ನೂರಾರು ಆಸೆಗಳನ್ನು ಮೊಳಕೆಯೊಡೆಸಿತ್ತು 

ಅನುದಿನವು ಅಲೆಮಾರಿಯಂತೆ ದುಡಿದು 

ನನ್ನ ಬೇಕು ಬೇಡಗಳಿಗೆ ಹೋರಾಡುತ್ತಿದ್ದಳು ನನ್ನವ್ವ 

ಅವ್ವಾ... ಯಾರವ್ವ ಕೊಟ್ಟರು ನಿಂಗಷ್ಟು

ಸ್ಪೂರ್ತಿ, ಸಹನೆ, ತಾಳ್ಮೆ...??

ನಾನೆಷ್ಟು ಪುಣ್ಯವಂತನೋ ಆ ದೇವರೇ ಬಲ್ಲ

ನಿನ್ನಂಥ ಅವ್ವ ಯಾವ ಕೋಟಿಗೂ ಲೆಕ್ಕಕ್ಕಿಲ್ಲ 

ನೀನೊಂದು ಅದ್ಭುತ.... ಅತಿ ಅದ್ಭುತ....

ನಿನ್ನ ಋಣಾನುಬಂಧಕ್ಕೆ ಬೆಲೆಯಿಲ್ಲ ನನ್ನವ್ವ.

ಅದು ತಿರಲು ನಿನ್ನವ್ವನಾಗೆ ಹುಟ್ಟಬೇಕು ,

ಮುಂದಿನ ಜನ್ಮವೊಂದಿದ್ದರೆ.......

ಹರಸವ್ವ ನಿನ್ನ ಮಗನನ್ನ 

ನೀ ಹೆಮ್ಮೆಯಿಂದ ಹೇಳಿಕೊಳ್ಳುವಂತಾಗಲು...

No comments:

Post a Comment

ಮಂಕುತಿಮ್ಮನ ಕಗ್ಗ..

ಕಳೆದ ಒಂದು ವರ್ಷದಿಂದ ಮನಸಿಗೆ ಖುಷಿ ಕೊಡುವ ಎಲ್ಲಾ ಕೆಲಸಗಳು ಮಾಡಲಿಕ್ಕೆ ಸಮಯ ಸಿಗ್ತಾ ಇದೆ. ಸಮಯ ಹೊಂದಿಸಿಕೊಳ್ಳುತ್ತಿದ್ದೇನೆ ಅಂದರೂ ಸರಿಯೇ. ಮುಖ್ಯವಾಗಿ ನಾನು ಕನ್ನಡ ...