ನನಗೆ ಮೊದಲಿನಿಂದ ತಿರುಗುವ ಹುಚ್ಚು. ಆದ್ರೆ ತಿರುಗಾಡುವ ಚಟಕ್ಕೆ ಉತ್ಸಾಹ ಬಂದಿದ್ದು ನಾನು ಬೆಂಗಳೂರಿಗೆ ಬಂದಾಗ. ಕೈ ತುಂಬಾ ಸಂಬಳ, ವಾರಕ್ಕೆ ಎರಡು ದಿನ ರಜೆ. ಮತ್ತೇ ಇನ್ನೇನ್ ಬೇಕು ತಿರುಗೊಕೇ ಅಲ್ವಾ? ಆ ರಜೆ ಸಿಗುವ ಎರಡು ದಿನಗಳು ರೂಮಲ್ಲಿ ಇದ್ದದ್ದೇ ಅಪರೂಪ. ವಾರಪೂರ್ತೀ ಕಷ್ಟ ಪಟ್ಟು ದುಡಿದವನಿಗೆ ಎರಡು ದಿನ ಸಂಪೂರ್ಣವಾಗಿ ನನಗೋಸ್ಕರ ಮೀಸಲು. ಮೊದಲೇ ನಾನು software ಕೂಲಿ. ಕೆಲಸದ ಒತ್ತಡ, ಬಕೆಟ್ ಹಿಡಿಯುವರ ಕಾಟ, ತಲುಪದ ಗುರಿಗಳು, ಹೆಸರಿಗೆ ಅಸ್ಟೆ ಸಿಗುವ ಹೈಕ್ಗಳು, ಮರೀಚಿಕೆ ಹಾಗಿರುವ on-site ಅವಕಾಶಗಳು ಹೀಗೆ ಇದೆಲ್ಲಾ IT ಯಲ್ಲಿ ಮಾಮೂಲು. ಎಲ್ಲಕ್ಕಿಂತ ಮುಖ್ಯವಾಗಿ managerಗಳ ಕಾಟ ತಡಿಯೊಕೇ ಆಗಲ್ಲ. IT ಯಲ್ಲಿ ಒಂದು ಅಲಿಖಿತ ಗಾದೆ ಇದೇ "ಜನ ಕಂಪೆನಿ ಬಿಡಲ್ಲ, manager ಬಿಡ್ತಾರೆ" ಅಂತ. ಅದಕ್ಕೆ ಬೆಂಗಳೂರ ಮಂದಿ ವಾರಾಂತ್ಯಕ್ಕೆ ಬೆಂಗಳೂರು ಬಿಟ್ಟು ಓಡುತ್ತಾರೆ. ನಾನು ಎಲ್ಲರೊಳಗೆ ಒಬ್ಬನಾಗಿದ್ದೆ.
ಇನ್ನು ಟ್ರಿಪ್ ಒಬ್ಬನೇ ಹೋಗೋಕೆ ಕಷ್ಟ. ಆದ್ರೆ ಯಾರು ಸಿಗದಿದ್ರೇ ಎನ್ ಮಾಡೋಕೆ ಆಗುತ್ತೆ, ನಾನ್ ಮಾತ್ರ ಪ್ಲಾನ್ ಮಾಡಿದ್ದು ಮಿಸ್ ಮಾಡಲ್ಲ. ಹೀಗೆ ಏಕಾಂಗಿ ಪಯಣಗಳು ಬಹಳ ಅಯಿತು. ನಾನು ಹೀಗೆ ಒಬ್ಬೊನೇ ಹೊರಟರೆ, ಫ್ರೆಂಡ್ಸ್ಗಳು ನಕ್ಕಿದ್ದು ಬಹಳ. ನಗೊರು ನಗ್ಲೀ, ಅಂತ ಹೆಗಲಿಗೆ ಬ್ಯಾಗ್ ಹಾಕಿಕೊಂಡು ಸಿಕ್ಕ ಬಸ್ ಹತ್ತೀ ಹೊರಟಿ ಬಿಡುತ್ತೇನೆ. ಥೇಟ್ ಬರಿಗೈ ಫಕೀರನ ತರ. ಇನ್ನು ನನಗೆ ಅತ್ಯಂತ ಇಷ್ಟ ಆಗೋ ಜಾಗಗಳಲ್ಲಿ ಧರ್ಮಸ್ಥಳ ಮತ್ತು ಕುಕ್ಕೆ ಸುಬ್ರಮಣ್ಯ. ದೇವಸ್ಥಾನಕ್ಕೆ ಬಂದರೆ ಸಾಕು ಮನಸ್ಸು ಶಾಂತವಾಗುತ್ತದೆ. ಹೊರಡಲು ಮನಸ್ಸೇ ಬರಲ್ಲ. ಆದ್ರೆ, ಬೆಂಗಳೂರು ನಂಗೆ "ಬಿಟ್ಟೇನೇಂದರು ಬಿಡದಿ ಮಾಯೆ". ಅನಿವಾರ್ಯ, ಹೋಗಲೇ ಬೇಕು. ದೇವರ ಆಶಿರ್ವಾದ ತುಂಬಾ ಮುಖ್ಯ ಜೀವನದಲ್ಲಿ. ನಂಬಿದವರ ಯಾವತ್ತು ಕೈ ಬಿಡಲ್ಲ ದೇವರು. ಇದನ್ನೆಲ್ಲ ಬರೆಯುವ ಹೊತ್ತಿಗೆ, ಬೆಂಗಳೂರು ಕಡೆಗ ಹೊರಡುವ, ಸಂಜೆ ಬಸ್ ಟೈಂ ಅಯಿತು ಅಂತ ಹಾರ್ನ್ ಮಾಡುತ್ತಿತ್ತು. ಬಂದೆ ಬೆಂಗಳೂರು.
Friday, 24 March 2017
ಬರಿಗೈ ಫಕೀರ
Subscribe to:
Posts (Atom)
ಮಂಕುತಿಮ್ಮನ ಕಗ್ಗ..
ಕಳೆದ ಒಂದು ವರ್ಷದಿಂದ ಮನಸಿಗೆ ಖುಷಿ ಕೊಡುವ ಎಲ್ಲಾ ಕೆಲಸಗಳು ಮಾಡಲಿಕ್ಕೆ ಸಮಯ ಸಿಗ್ತಾ ಇದೆ. ಸಮಯ ಹೊಂದಿಸಿಕೊಳ್ಳುತ್ತಿದ್ದೇನೆ ಅಂದರೂ ಸರಿಯೇ. ಮುಖ್ಯವಾಗಿ ನಾನು ಕನ್ನಡ ...
-
ನನಗೆ ಮೊದಲಿನಿಂದ ತಿರುಗುವ ಹುಚ್ಚು. ಆದ್ರೆ ತಿರುಗಾಡುವ ಚಟಕ್ಕೆ ಉತ್ಸಾಹ ಬಂದಿದ್ದು ನಾನು ಬೆಂಗಳೂರಿಗೆ ಬಂದಾಗ. ಕೈ ತುಂಬಾ ಸಂಬಳ, ವಾರಕ್ಕೆ ಎರಡು ದಿನ ರಜೆ. ಮತ್ತೇ...
-
ನಿನ್ನವ್ವನಾಗೆ ಹುಟ್ಟಬೇಕು, ಮುಂದಿನ ಜನ್ಮವೊಂದಿದ್ದರೆ ==================== ಹುಟ್ಟಿ ಬಂದೆ ನಾ ಈ ಭೂಮಿಗೆ ಅರಿವಿಲ್ಲದ ಮಾಂಸದ ಮುದ್ದೆಯಾಗಿ. ನನ್ನ ಆ ಮೊದಲ ಕಿ...
-
ನನ್ನ ಸಾಹಿತ್ಯ ಓದಿಗೆ ಹೊಸ ಚೈತನ್ಯ ತುಂಬಿದವರು ಎಸ್ ಎಲ್ ಭೈರಪ್ಪ ಅವ್ರು. ಅವರು ದಸರಾ ಉದ್ಘಾಟನೆ ಮಾಡುತ್ತಿರುವ ಈ ಸಂಧರ್ಭದಲ್ಲಿ ಖುಷಿಗೆ ಈ ಬ್ಲಾಗ್. ಅವರ ಗ್ರಹಣ, ನಾಯಿ...