ಕಳೆದ ಒಂದು ವರ್ಷದಿಂದ ಮನಸಿಗೆ ಖುಷಿ ಕೊಡುವ ಎಲ್ಲಾ ಕೆಲಸಗಳು ಮಾಡಲಿಕ್ಕೆ ಸಮಯ ಸಿಗ್ತಾ ಇದೆ. ಸಮಯ ಹೊಂದಿಸಿಕೊಳ್ಳುತ್ತಿದ್ದೇನೆ ಅಂದರೂ ಸರಿಯೇ. ಮುಖ್ಯವಾಗಿ ನಾನು ಕನ್ನಡ ಸಾಹಿತ್ಯ ಅಧ್ಯಯನ ಮಾಡಬೇಕು ಅನ್ಕೊಂಡಿದ್ದು, ಅತಿಹೆಚ್ಚು ತಿರುಗಾಟ ಮಾಡ್ಬೇಕು ಅನ್ಕೊಂಡಿದ್ದು. ಅದರ ಜೊತೆಯಲ್ಲೇ, ಸದಭಿರುಚಿಯ ನಾಟಕಗಳು ಬಂದ್ರೆ ನೋಡ್ತೀನಿ, ನೃತ್ಯ ಕಲಿಬೆಕು ಅಂತ ಬಹುದಿನಗಳ ಆಸೆ ಇತ್ತು. ಅದನ್ನು ಮಾಡ್ತಿದ್ದೀನಿ. ಈಗ ಹೊಸ ಶೋಕಿ ಅಂತ ಕ್ಯಾಮೆರಾ ತಗೊಂಡು, ಅದ್ರಲ್ಲಿ ಫೋಟೋಗ್ರಫಿ ಕಲಿಬೇಕು ಅನ್ಕೊಂಡಿದ್ದೀನಿ. ಅದಕ್ಕೆಲ್ಲ ಮೂಲ ಕಾರಣ, ನಾನು ಯಾವಾಗಲು ಬ್ಯುಸಿ ಇರ್ಬೇಕು, ಸಮಯ ಹಾಳು ಮಾಡದೇ ಯಾವುದಾದರೊಂದು ಕಾರ್ಯದಲ್ಲಿ ಮಗ್ನವಾಗಿರೋದು. ಹಾಗಂತ ಏನೇನೋ ಕೆಲಸ ಮಾಡೋಕೆ ಮನಸಿಲ್ಲ. ಮನಸಿಗೆ ಹಿಡಿಸುವ ಕೆಲಸ ಮಾಡಬೇಕು. ಇದಕ್ಕೆ ಹೊಸ ಸೇರ್ಪಡೆ ನನ್ನ ಅಡುಗೆ ಕ್ರಾಂತಿ. ಪಾಕ ಕ್ರಾಂತಿ, ನಾನು ಮಾಡುವ ಈ ಅವತಾರಕ್ಕೆ ಕ್ರಾಂತಿ ಅಂದ್ರೆ ತಪ್ಪೇ ಇಲ್ಲ. ಸುಮಾರು ಒಂದು ತಿಂಗಳಾಯಿತು ಹೊರಗಡೆ ತಿಂದು. ಆ ಮಟ್ಟಿಗೆ ಅಡುಗೆ ಕಾರ್ಯದಲ್ಲಿ ಮಗ್ನ ಆಗಿದ್ದೀನಿ. ಬೆಳಿಗ್ಗೆ ತಿಂಡಿ, ಮಧ್ಯಾಹ್ನ ಊಟಕ್ಕೆ ಡಬ್ಬಿ ಹಾಕೊಂಡು, ಸಂಜೆ ಚಹಾ ಮಾಡಿ ಕುಡಿದು, ಡಾನ್ಸ್ ಕ್ಲಾಸ್ ಮುಗಿಸಿಕೊಂಡು ಬಂದು ಅಡುಗೆ ಮಾಡಿ, ಊಟ ಮಾಡಿ ಹಾಸಿಗೆ ಸೇರೋಕೆ ರಾತ್ರಿ 10 ಗಂಟೆ ಆಗುತ್ತೆ.
ಇದಕ್ಕೆಲ್ಲ ನನಗೆ ಸ್ಫೂರ್ತಿ ನೀಡೋದು ಮಂಕುತಿಮ್ಮನ ಕಗ್ಗ.
"ಇರುವ ಕೆಲಸವ ಮಾಡು ಕಿರಿದೆನದೆ ಮನವಿಟ್ಟು ।
ದೊರೆತುದು ಹಸಾದವೆಂದುಣ್ಣು ಗೊಣಗಿಡದೆ ।।
ಧರಿಸು ಲೋಕದ ಭಾರವ ಪರಮಾರ್ಥವನು ಬಿಡದೆ ।
ಹೊರಡು ಕರೆ ಬರಲ್ ಅಳದೆ – ಮಂಕುತಿಮ್ಮ"
ನಾನು ಮಾಡುವ ಕೆಲಸ ಯಾವತ್ತೂ ಸಣ್ಣದು ಅನಿಸಲೇ ಇಲ್ಲ. ದೊಡ್ಡ ಹುದ್ದೆಗೆ ಹೋಗಬೇಕು ಅನ್ನೋ ಆಸೆ ಇದೆ, ಆದ್ರೆ ಕೊರಗಿಲ್ಲ. ಮನುಷ್ಯನ ಆಸೆಗೆ ಮಿತಿ ಎಲ್ಲಿದೆ. ಜೀವನದಲ್ಲಿ ನಮಗಿಂತ ಮೇಲೆ ಇರುವವರನ್ನು ನೋಡಿ ಕೊರಗುವದಕಿಂತ, ಇರುವ ಕೆಲಸ ಗೊಣಗಿಡದೆ ಮಾಡಿಕೊಂಡು ಹೋಗುತ್ತೇನೆ. ಇನ್ನು ಕೊನೆಯ ಸಾಲು, ಕರೆ ಬಂದಾಗ ಅಳದೆ ಹೊರಡಬೇಕು ಅಂದರೆ ಬದುಕಿದ್ದಾಗ ಕೊರಗದೆ, ಸುಂದರ ಜೀವನ ಸವೆಸಿ ಹೊರಡಬೇಕು ಅಳದೆ ಅಂತ ನೇ ನಾನು ಅರ್ಥ ಮಾಡಿಕೊಂಡಿದ್ದೇನೆ.
ಹಲವು ಸಲ ಪ್ರವಾಸ ಹೋರಾಡಲು ನನಗೆ ಸ್ನೇಹಿತರು ಸಿಗಲ್ಲ. ಕೆಲವು ಪ್ರವಾಸಗಳು ಒಂಟಿಯಾಗಿಯೇ ಮಜವಾಗಿರುತ್ತವೆ. ಒಂಟಿ ಜೀವನ ನನಗಂತೂ ಬೇಸರ ಮೂಡಿಸಿಲ್ಲ. ಮೊದಲು ಸ್ನೇಹಿತರ ಜೊತೆ ಬಾಡಿಗೆ ಮನೆ ಹಂಚಿಕೊಂಡು, ಹಾಸ್ಟೆಲ್ ಅಲ್ಲಿ ಸ್ನೇಹಿತರ ಜೊತೆ ರೂಮ್ ಶೇರ್ ಮಾಡಿಕೊಂಡು ಬಂದವನಿಗೆ ಈ ಒಂಟಿ ಜೀವನ ಕಷ್ಟ ಅಂತ ಯಾವತ್ತೂ ಅನ್ಸಿಲ್ಲ. ಇದೊಂಥರಾ ಚೆನ್ನಾಗಿದೆ, ಹೊಸ ಅನುಭವ ಸಹ. ಅದಕ್ಕೆ ಮೂಲ ಕಾರಣ ಕಗ್ಗವೆ
"ಒರ್ವನೇ ನಿಲುವೆ ನೀನುತ್ಕಟಕ್ಷಣಗಳಲಿ ।
ಧರ್ಮಸಂಕಟಗಳಲಿ, ಜೀವಸಮರದಲಿ ।।
ನಿರ್ವಾಣದೀಕ್ಷೆಯಲಿ, ನಿರ್ಯಾಣಘಟ್ಟದಲಿ ।
ನಿರ್ಮಿತ್ರನಿರಲು ಕಲಿ – ಮಂಕುತಿಮ್ಮ ।।"
ಕಷ್ಟ, ಸುಖ, ಧರ್ಮಸಂಕಟ, ನಿರ್ವಾಣ, ನಿರ್ಯಾಣ ಏನೇ ಇರಲಿ ನಾವು ನಿಲ್ಲೋದು ಒಬ್ಬರೇ. ಹಾಗಾಗಿ ಒಬ್ಬರೇ ಇರುವದನ್ನು ಕಲಿಯಬೇಕು ಮತ್ತು ಆ ಒಂಟಿತನ ಖುಷಿಯಿಂದಲೇ ಅನುಭವಿಸಬೇಕು .
ಈ ಜೀವನಕ್ಕೆ ಈ ಎರಡು ಕಗ್ಗಗಳು ಸಾಕು ಅನ್ನಿಸುವಷ್ಟರ ಮಟ್ಟಿಗೆ ಇಷ್ಟ ಆಗಿವೆ. ಮಂಕುತಿಮ್ಮನ ಕಗ್ಗ ಎರಡನೇ ಭಗವದ್ಗೀತೆ ಅಂದರೆ ತಪ್ಪಾಗದು.

No comments:
Post a Comment